ಕನ್ನಡ ಚಟುವಟಿಕೆ
೬೫ನೇ ಕನ್ನಡ ರಾಜ್ಯೋತ್ಸವದ ವರದಿ
ಕನ್ನಡ ರಾಜ್ಯೋತ್ಸವವನ್ನು ೨-೧೧-೨೦೨೦ರಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ಎಲ್ಲಾಕಡೆ ಕರೋನಯಿದ್ದ ಕಾರಣದಿಂದ ೬೫ನೇ ಕನ್ನಡ ರಾಜ್ಯೋತ್ಸವವನ್ನು ವಾಸ್ತವ ತರಗತಿಯ ಮೂಲಕವೇ ಆಚರಿಸಲಾಯಿತು, ಕನ್ನಡ ನಾಡು ನುಡಿಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು, ಪ್ರಾರ್ಥನೆ,ಸ್ವಾಗತಭಾಷಣ,ಸಮೂಹನೃತ್ಯ,ಹಾಸ್ಯ ಪ್ರಹಸನ,ನಾಡು ನುಡಿಯ ಮಹತ್ವದ ಭಾಷಣ ಮುಂತಾದ ಮನೋರಂಜನ ಕಾರ್ಯಕ್ರಮಗಳನ್ನು ಮಕ್ಕಳ ಮನಸ್ಸಿಗೆ ಮುದನೀಡುವಂತೆ ಮಾಡಲಾಯಿತು. ಪ್ರಾಂಶುಪಾಲರು ನೀಡಿದ ಹಿತವಚನ ಮಕ್ಕಳಲ್ಲಿ ಭಾಷಾಪ್ರೇಮವನ್ನು ಹೆಚ್ಚುಮಾಡುವಂತೆ ಹೃದಯ ಸ್ಪರ್ಶಿಯಾಗಿತ್ತು, ನಾಡಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಮಸ್ತೆ ಮ್ಯಾಮ್
“ನಮ್ಮ ಪರಿಸರ”
ಓ ಮನುಜ…..
ಓ ಮನುಜಾ……….
ಧರೆಯು ಹತ್ತಿ ಉರಿಯುತಿಹುದು,
ಪ್ರಾಣ ಪಕ್ಷಿಯು ಹಾರುತಿಹುದು,
ಎಲ್ಲೆಲ್ಲೂ ರೋಧನ, ಆಕ್ರಂದನ
ಮುಗಿಲು ಮುಟ್ಟಿವೆ,
ಸುಡುವ ಹೆಣಗಳ ಕಾವು!!!!
ಅರೆ,
ಇದೆಲ್ಲವಾ ನಿನಗೇಕೆ ಹೇಳುತಲಿರುವೆ ಎನ್ನುವೆಯಾ?????!!!!!
ಹೌದು, ಇದಕೆ ಕಾರಣ ನೀನೇ!!! ನೀನೇ!!!!!!!!!
ಅಂದು ತುಂಬಿದ
ಕಣ್ಮನ ಸೂರೆಗೊಂಡ ಪಕೃತಿಯ ಮಾಡಿದೆ ನಾಶ,
ಇದರ ಫಲವೇ ಇಂದಿನ ವಿನಾಶ,
ಈಗಾದರೂ ಎಚ್ಚೆತ್ತು ನಿಲ್ಲಿಸು, ನಿಲ್ಲಿಸು, ನಿಲ್ಲಿಸು
ಪ್ರಕೃತಿಯ ಮಡಲಿಗೆ ಬೀಸುತ್ತಿರುವ ಕೊಡಲಿಯ ಏಟನು……
ಯೋಚಿಸು, ಯೋಚಿಸು, ಯೋಚಿಸು,,,,,,
ಮರ ಕಡಿಯುವ ಮುನ್ನ
ನೂರು ಬಾರಿ ಯೋಚಿಸು,
ಅದಕಿಲ್ಲವೇ ಜೀವ? ಅದಕಿಲ್ಲವೇ ಬದುಕುವ ಹಂಬಲ?
ನಿನಗೆ ಮಾತ್ರ ಬದುಕುವ ಆಸೆಯೇ????
ಬಿಡು, ಬಿಡು, ಬಿಡು,
ನಿನ್ನೀ ಸ್ವಾರ್ಥ ತುಂಬಿದ ಗುಣವ,
ಕಣ್ತೆರೆದು ನೋಡು
ಎಲ್ಲರ ಆನಂದವ.
✍️ ಮಾಸ್ತಿ ಬಾಬು.ಎಂ
ಅಧ್ಯಾಪಕರು
“ಪರಿಸರ ದಿನಾಚರಣೆಯ ಶುಭಾಶಯಗಳು”